ಸ್ವಂತ ಮನೆ ಬಾಡಿಗೆ ಮನೆ ಗೃಹಪ್ರವೇಶದ ಬಗ್ಗೆ ಕೆಲವು ಮುಖ್ಯವಾದ ಸಲಹೆಗಳು

0 14

ಸಾಮಾನ್ಯವಾಗಿ ಹೊಸ ಮನೆಯನ್ನು ಕಟ್ಟಿ ಗುರು ಪ್ರವೇಶ ಮಾಡುವವರು ಮನೆಯ ಯಜಮಾನ ಅಥವಾ ಯಜಮಾನ ಅಥವಾ ಮಕ್ಕಳ ಜಾತಕವನ್ನು ತೋರಿಸಿ ದಿನವನ್ನು ಗೊತ್ತು ಮಾಡಿಕೊಳ್ಳುತ್ತಾರೆ ಸಾಮಾನ್ಯವಾಗಿ ಬಾಡಿಗೆ ಮನೆಗೆ ಹೋಗುವವರು ಮನೆಯಲ್ಲಿ ಹಾಲು ಕಾಯಿಸಿ ಮನೆಯ ಒಳಗೆ ಹೋಗುತ್ತಾರೆ ಬಾಡಿಗೆದಾರರು ಅಥವಾ ಸ್ವಂತ ಮನೆಗೆ ಹೋಗುವವರು ಈ ಇಬ್ಬರಿಗೂ ಸಹ ಸ್ವಲ್ಪ ಮುಖ್ಯವಾದ ವಿಷಯಗಳನ್ನು ತಿಳಿಸಬೇಕು

ಹೊಸ ಮನೆಯನ್ನು ಕಟ್ಟಿದವರು ಮೊದಲಿಗೆ ಹಸುವನ್ನು ಮನೆಯ ಒಳಗೆ ಕರೆಸಿ ಪೂಜೆ ಮಾಡಿ ಹೋಮ ಅವನಗಳನ್ನು ಮಾಡಿ ಹೋಗುವುದು ವಾಡಿಕೆಯಲ್ಲಿ ಇದೆ ಬಾಡಿಗೆ ಮನೆಯಲ್ಲೇ ಹೋಗುವವರು ಬ್ರಹ್ಮ ಮುಹೂರ್ತದಲ್ಲಿ ಹೋಗುವುದು ಮತ್ತು ಪೂಜೆ ಮಾಡಿ ಹಾಲನ್ನು ಒಪ್ಪಿಸುವುದು ವಾಡಿಕೆ ಆಗಿದೆ ನೀವು ಮನೆಯಲ್ಲಿ ಯಾವುದೇ ಪೂಜೆ ಮಾಡಬಾರದು ಬ್ರಹ್ಮ ಮುಹೂರ್ತವು ತುಂಬಾ ಉತ್ತಮವಾದ ಸಮಯವಾಗಿದೆ ನೀವು ಮನೆಯಲ್ಲಿ ಹಾಲನ್ನು ಕಾಯಿಸಲು ಉತ್ತಮವಾದ ದಿನಗಳು ಯಾವುದು ಎಂದರೆ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಮತ್ತು ಭಾನುವಾರ

ಈ ವಾರಗಳಲ್ಲಿ ಬೆಳಗಿನ ಜಾವ ಬ್ರಹ್ಮ ಮುಹೂರ್ತ ಅಂದರೆ ನಾಲ್ಕುವರೆಯಿಂದ 5:30 ವರೆಗೂ ಈ ಸಮಯದಲ್ಲಿ ಹಾಲನ್ನು ಕಾಯಿಸಿ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಇದಕ್ಕಿಂತ ಮುಂಚೆ ಮಂಗಳಕರವಾದ ವಸ್ತುಗಳನ್ನು ಮನೆಯ ಒಳಗೆ ಪ್ರವೇಶ ಮಾಡಿಸಬೇಕು ಆ ಮಂಗಳಕರವಾದ ವಸ್ತುಗಳು ಯಾವುದು ಎಂದರೆ ಈ ಕೆಳಗೆ ತಿಳಿಸಲಾಗುತ್ತದೆ

ಮೊದಲಿಗೆ ಮನೆಯ ಯಜಮಾನ ಪೂಜೆ ಸಮಯದಲ್ಲಿ ಮನೆಯ ಒಳಗೆ ಹೋಗುವಾಗ ತುಂಬಿದ ಕೊಡದಲ್ಲಿ ನೀರನ್ನು ತುಂಬಿಕೊಂಡು ಮನೆಯ ಒಳಗಡೆ ಬಲಗಾಲನ್ನು ಇಟ್ಟು ಪ್ರವೇಶ ಮಾಡಬೇಕು ನಂತರ ಅರಿಶಿನ ಕುಂಕುಮ ಕಲ್ಲುಪ್ಪು ಮತ್ತು ಅಕ್ಕಿ ಬೇಳೆಕಾಳುಗಳು ಮತ್ತು ಬೆಲ್ಲ ಇಷ್ಟು ಮಂಗಳಕರ ವಸ್ತುಗಳನ್ನು ನೀವು ಮನೆಗೆ ಪ್ರವೇಶ ಮಾಡಿಸಬೇಕು ಆದಷ್ಟು ಬ್ರಹ್ಮ ಮುಹೂರ್ತ ಸಮಯದಲ್ಲಿ ಪೂಜೆ ಮಾಡಿ ಹಾಲನ್ನು ಒಪ್ಪಿಸುವುದು ತುಂಬಾ ಒಳ್ಳೆಯದು

ಹೋಮ ಮಾಡಿಸುವರು ಕಡ್ಡಾಯವಾಗಿ ಗಣಪತಿ ಹೋಮ ಮಾಡಿಸಿದರೆ ತುಂಬಾ ಒಳ್ಳೆಯದು ಬ್ರಹ್ಮ ಮುಹೂರ್ತ ಸಮಯದಲ್ಲಿ ಹಾಲನ್ನು ಕಾಯಿಸಬೇಕು ಹಾಲನ್ನು ಕಾಯಿಸುವಾಗ ವಲಯ ಮೇಲೆ ಅಕ್ಕಿ ಹಿಟ್ಟಿನಿಂದ ರಂಗೋಲಿ ಹಾಕಿರಬೇಕು ಮೊದಲನೇ ಲೋಟದ ಹಾಲನ್ನು ದೇವರಿಗೆ ನೈವೇದ್ಯವಾಗಿ ಇಟ್ಟು ನಂತರ ಹಾಲನ್ನು ಎಲ್ಲರೂ ಬಳಸಬೇಕು ನಂತರ ಆ ದಿನದ ಸಂಜೆ ಮನೆ ದೇವರಿಗೆ ದೀಪ ಹಚ್ಚಿ ಪೂಜೆಯನ್ನು ಮಾಡಬೇಕು ಮತ್ತು ಅದೇ ಮನೆಯಲ್ಲಿ ಮಲಗಬೇಕು.

Leave A Reply

Your email address will not be published.