ಲಕ್ಕಿ ಸೊಪ್ಪು ಬಂಗಾರದ ಉಪಯೋಗ!

0 12

ಲೆಕ್ಕಿ ಸೊಪ್ಪಿನ ಬಗ್ಗೆ ನಿಮಗೆ ಎಷ್ಟು ಗೊತ್ತು ಇದನ್ನು ನೀರು ಗುಂಡಿ ಎಂದು ಸಹ ಕರೆಯುತ್ತಾರೆ ಈ ಗಿಡವು ನೀಲಿ ಬಣ್ಣ ಮತ್ತು ಹಸಿರು ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಸಹ ಕಾಣಸಿಗುತ್ತದೆ ಕರಿ ಲಕ್ಕಿ ಗಿಡವನ್ನು ಬಂಗಾರದ ತಯಾರಿಕೆಯಲ್ಲಿ ಸಹ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ ಇದನ್ನು ನಾವು ದೇವರ ಪೂಜೆಯನ್ನು ಸಹ ಬಹಳ ಬಳಸುತ್ತೇವೆ.

ಈ ಗಿಡವು ಸಂಪೂರ್ಣ ಉಷ್ಣ ವಾಗಿದ್ದು ಆದರೆ ಹೂವುಗಳು ಮಾತ್ರ ಸಂಪೂರ್ಣ ಶೀತಮಯವಾಗಿ ಇರುತ್ತದೆ ಕ್ರಿಮಿಕೀಟದ ಬಾಧೆ ಇದ್ದಾಗ ಇತರ ಎಲೆಗಳನ್ನು ಹೆಚ್ಚಾಗಿ ಬಳಸಬಹುದು ನಾವು ಆಹಾರ ಧಾನ್ಯಗಳನ್ನು ಶೇಖರಣೆಯನ್ನು ಮಾಡುತ್ತೇವೆ ಅದರ ಜೊತೆ ಇದರ ಎಲೆಗಳನ್ನು ಅರಳಿದರೆ ಸಾಕು ಆ ಜಾಗಕ್ಕೆ ಯಾವುದೇ ರೀತಿಯ ಕ್ರಿಮಿಕೀಟ ಬರುವುದಿಲ್ಲ ಈ ಗಿಡದ ಎಲೆಯು ಕ್ರಿಮಿನಾಶಕ ಗುಣವನ್ನು ಹೊಂದಿರುತ್ತದೆ.

ಇದು ಜಂತುಹುಳದ ಸಮಸ್ಯೆಯನ್ನು ನಿವಾರಿಸುತ್ತದೆ ಇದು ಕೀಟನಾಶಕ ಗುಣವನ್ನು ಸಹ ಹೊಂದಿದೆ ಇದನ್ನು ಪುಡಿ ಮಾಡಿ ಮನೆಯ ಸುತ್ತ ಹೊಗೆಯನ್ನು ಹಾಕಿದರೆ ಮನೆಯ ಒಳಗೆ ಯಾವುದೇ ರೀತಿಯ ಸೊಳ್ಳೆ ನೊಣ ಇನ್ನಿತರ ಕೀಟಗಳು ಬರುವುದಿಲ್ಲ ಅಷ್ಟೇ ಅಲ್ಲದೆ ಈ ಗಿಡವು ಆಯುರ್ವೇದದಲ್ಲಿಯೂ ಸಹ ಕೆಲಸ ಮಾಡುತ್ತದೆ ಸಂಧಿವಾತಕ್ಕೆ ಈ ಗಿಡವು ಮನೆಮದ್ದಾಗಿದೆ ಇದರ ಎಲೆಯನ್ನು ತೆಗೆದುಕೊಂಡು ಅದರಲ್ಲಿ ತೈಲವನ್ನು ತೆಗೆದು ನಮ್ಮ ದೇಹಕ್ಕೆ ಹಚ್ಚಿದರೆ ಸಾಕು ಸಂಧಿವಾತವು ಕಡಿಮೆಯಾಗುತ್ತದೆ

Leave A Reply

Your email address will not be published.