ಕೈಯಿಂದ ಜಾರಿ ಅರಿಶಿನ ಕುಂಕುಮ ಬಿದ್ದರೆ ಏನು ಅರ್ಥ..?

0 2,766

ನಮ್ಮ ಹಿಂದೂ ಧರ್ಮದಲ್ಲಿ ಅರಿಶಿನ ಮತ್ತು ಕುಂಕುಮಕ್ಕೆ ಉತ್ತಮ ಮೌಲ್ಯವಿದೆ ಪೂಜೆ ಮಾಡುವಾಗ ಇದನ್ನು ನಾವು ಹೆಚ್ಚಾಗಿ ಬಳಸುತ್ತೇವೆ ಅರಿಶಿಣ ಸೂರ್ಯ ಹಾಗೂ ಅದೃಷ್ಟದ ಪ್ರತೀಕ ಇದು ನಮ್ಮ ಜೀವನದಲ್ಲಿ ಏಳಿಗೆಯನ್ನು ಎತ್ತಿ ಹಿಡಿಯುತ್ತದೆ ನಾವು ಪೂಜೆ ಮಾಡುವಾಗ ಅರಿಶಿನವನ್ನು ಹೆಚ್ಚಾಗಿ ಬಳಸುತ್ತೇವೆ ಅರಿಶಿನ ಆರೋಗ್ಯದ ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಪಡೆದಿದೆ.

ಮದುಮಗಳನ್ನು ಎಲ್ಲಾ ರೀತಿಯಿಂದ ಪುನೀತಗೊಳಿಸಲು ಅರಿಶಿಣ ಶಾಸ್ತ್ರವನ್ನು ಮಾಡುತ್ತೇವೆ ಹಿಂದೂ ಧರ್ಮದಲ್ಲಿ ಅರಿಶಿನವನ್ನು ದಾನ ಮಾಡುವುದು ಶುಭವೆಂದು ತಿಳಿಸಲಾಗಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರಿಶಿನವನ್ನು ದಾನ ಮಾಡುವುದರಿಂದ ಗುರುಗ್ರಹದಲ್ಲಿ ಹೊಂದಾಣಿಕೆ ಕಾಣಿಸಿಕೊಳ್ಳುತ್ತದೆ.

ಪ್ರತಿದಿನ ಹರಿಶಿಣವನ್ನು ಒಂದು ಚಿಟಿಕೆಯಷ್ಟು ಗಣಪತಿಗೆ ನೈವೇದ್ಯಾವ ನೀಡುವುದರಿಂದ ವಿವಾಹದಲ್ಲಿ ಬರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತದೆ ನೀವು ಪೂಜೆ ಮಾಡುವಾಗ ಅರಿಶಿನದ ಡಬ್ಬಿ ಕೈ ಜಾರಿ ಬಿದ್ದರೆ ಅದು ಉತ್ತಮ ಲಕ್ಷಣವಾಗಿ ಇರುವುದಿಲ್ಲ ಇದು ಮನೆಯ ಗಂಡು ಮಕ್ಕಳಿಗೆ ಯಾವುದಾದರೂ ಒಂದು ರೀತಿಯ ಅಪವಾದ ಬರುತ್ತದೆ.

ಇದರಿಂದ ಮನೆಗೆ ಗಂಡು ಮಕ್ಕಳಿಗೆ ಕೆಟ್ಟ ಹೆಸರು ಬರುತ್ತದೆ ಇದರಿಂದ ದುರಭ್ಯಾಸಕ್ಕೆ ಒಳಗಾಗಿ ಅದರಿಂದ ಆರೋಗ್ಯಕ್ಕೆ ಹನಿಕರ ಉಂಟಾಗುತ್ತದೆ ಇದಕ್ಕೆ ಪರಿಹಾರವೆಂದರೆ ವಾರಕ್ಕೆ ಒಂದು ಬಾರಿಯಾದರೂ ಸುಬ್ರಹ್ಮಣ್ಯ ಸ್ವಾಮಿ ಅಥವಾ ದುರ್ಗಾದೇವಿಯ ದೇವಾಲಯಕ್ಕೆ ಹೋಗಿ ಮನೆಯ ಯಜಮಾನನ ಹೆಸರಿನಲ್ಲಿ ಪೂಜೆ ಮತ್ತು ಅರ್ಚನೆಯನ್ನು ಮಾಡಿಸಿಕೊಂಡು ಬರಬೇಕು.

ಮನೆಯ ಯಜಮಾನನ ಆರೋಗ್ಯದಲ್ಲಿ ಗಮನವನ್ನು ನೀಡಬೇಕು ಈ ಕಾರಣದಿಂದ ಮನೆಯಲ್ಲಿ ಅರಿಶಿನ ಕುಂಕುಮವು ಯಾವುದೇ ಮಂಗಳ ಕಾರ್ಯದಲ್ಲಿ ಕೈಯಿಂದ ಜಾರಿ ಬೀಳದಂತೆ ಎಚ್ಚರವಹಿಸುವುದು ಒಳ್ಳೆಯದು

Leave A Reply

Your email address will not be published.