ಆರೋಗ್ಯ ಕಾಪಾಡುವ ಬಾಳೆದಿಂಡಿನ ಉಪಯೋಗಗಳು!

0 20

ಬಾಳೆ ದಿಂಡು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ ತುಂಬಾ ಬಲಿತ ಮರಗಳಲ್ಲಿ ಮಧ್ಯದ ಭಾಗವನ್ನು ಕತ್ತರಿಸಿದಾಗ ಅದರ ಒಳಗೆ ಸಿಗುವ ಭಾಗವನ್ನು ನಾವು ಬಾಳೆ ದಿಂಡು ಎಂದು ಕರೆಯುತ್ತೇವೆ ಇದರ ಸುತ್ತ ಪದರಗಳು ಇರುತ್ತದೆ ಅದನ್ನು ತೆಗೆದು ಮಧ್ಯದಲ್ಲಿ ಉಳಿಯುವ ಗಟ್ಟಿ ಭಾಗವನ್ನು ನಾವು ಬಾಳೆ ದಿಂಡು ಎಂದು ಕರೆಯುತ್ತೇವೆ.

ಇದನ್ನು ನಾವು ತರಕಾರಿಗಳ ರೀತಿಯಲ್ಲಿ ಉಪಯೋಗಿಸಬಹುದು ಇದನ್ನು ಕತ್ತರಿಸಿ ಮಜ್ಜಿಗೆಯ ಒಳಗೆ ನೆನೆಸಿ ನಂತರ ಇದನ್ನು ನಾವು ತರಕಾರಿ ಜೊತೆ ಬಳಸಬಹುದಾಗಿದೆ ಇದರಲ್ಲಿ ಇರುವ ಫೈಬರ್ ಪೊಟ್ಯಾಶಿಯಂ ಮತ್ತು ವಿಟಮಿನ್ ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಶೇಕಡ 90 ಭಾಗ ನಾಡಿನ ಪದಾರ್ಥವಿದೆ ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ

ಇದು ರಕ್ತ ಹೀನತೆಗೂ ಸಹ ಅತ್ಯುತ್ತಮವಾದ ಔಷಧಿಯಾಗಿದೆ ಪೊಟ್ಯಾಶಿಯಂ ಅಂಶ ಇದರಲ್ಲಿ ತುಂಬಾ ಹೇರಳವಾಗಿರುವುದರಿಂದ ಇದು ಬಿಪಿಯನ್ನು ಸಹ ಕಂಟ್ರೋಲ್ ಮಾಡುತ್ತದೆ ಇದರಲ್ಲಿರುವ ನಾರಿನ ಅಂಶ ಇನ್ಸುಲಿನ್ಗಳನ್ನು ಪ್ರಚೋದನೆ ಮಾಡುತ್ತದೆ ಈ ಕಾರಣದಿಂದ ಡಯಾಬಿಟಿಸ್ ಗೆ ಇದು ಅತ್ಯುತ್ತಮವಾದ ತರಕಾರಿಯಾಗಿದೆ ಮತ್ತು ಇದು ಕಿಡ್ನಿಯಲ್ಲಿ ಕಲ್ಲು ಸೇರಿರುವವರಿಗು ಸಹ ರಾಮಬಾಣ ಎಂದು ಸಹ ಹೇಳಬಹುದು ಇದರಲ್ಲಿ ಇರುವ ನಾರಿನ ಅಂಶವೂ ಕಿಡ್ನಿಯಲ್ಲಿ ಇರುವ ಕಲ್ಲುಗಳ ನಿವಾರಣೆಗೆ ತುಂಬಾ ಸಹಾಯ ಮಾಡುತ್ತದೆ.

Leave A Reply

Your email address will not be published.