ಶಂಕರರೇ ಹೇಳಿಕೊಟ್ಟ ದಿವ್ಯ ರಹಸ್ಯ!ಇರೋದು ಮಂತ್ರದಿಂದ ಲಕ್ಷ್ಮಿ ಕಟಾಕ್ಷ ಗ್ಯಾರಂಟಿ!

ನಾರ್ಮದೆ ಉಕ್ಕಿ ಹರಿಯುತ್ತಿದ್ದಳು. ಪ್ರವಾಹನೋ ಪ್ರವಾಹ ಇದು ಧರಣಿಗಾಗಿ ಆಗಿದ್ದ ಆಪತ್ತು ಆಗಿದ್ದೆ,ಕಂಡ ಕಂಡ ಕಡೆ ಅಸಮಾಧಾನ ಅಸಮಾತೋಲನ ಇರುವ ಕಾಲದಲ್ಲಿ ಬಂದವರು ಶಂಕರಾಚಾರ್ಯರು. ಹಿಂದೆ ದೇವಾ ಅಸುರರು ನಡೆಸಿದ್ದ ಸಮುಂದ್ರ ಮಂತನದಲ್ಲಿ ಸೃಷ್ಟಿಯಾದ ಅಲಾಲದಿಂದ ಸೃಷ್ಟಿಯನ್ನು ಉಳಿಸುವುದಕ್ಕೆ ಭೋಲೆನಾಥ ಶಂಕರ ಬಂದರು. ಅದೇ ರೀತಿಅಜ್ಞಾನವನ್ನು ತೊಲಗಿಸಿ ಪ್ರಪಂಚವನ್ನು ಉಳಿಸುವುದಕ್ಕೆ ಬಂದವರೇ ಆದಿಶಂಕರಾಚಾರ್ಯರು. ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತಾರೋ ಅವರೆ ಶಂಕರ.

ಇಂತಹ ಒಳಿತನ್ನು ಮಾಡಿದ ಶಂಕರಾಚಾರ್ಯರು ಅದರಲ್ಲಿ ಒಂದು ಕನಕಧಾರ ಸೋತ್ರ. ಈ ಸೋತ್ರವನ್ನು ಶ್ರೇದ್ದೆ ಭಕ್ತಿಯಿಂದ ಪಟನೆ ಮಾಡಿದರೆ ದಡ್ಡ ದರಿದ್ರ ಇರುವವನು ಕೂಡ ಸಿರಿವಂತನಾಗುತ್ತಾನೆ.
ಆದಿ ಶಂಕರರು ಕೇರಳದ ಕಾಲಟಿ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ದಂಪತಿಗೆ ಜನಿಸಿದರು. ಶಿವನ ಅನುಗ್ರಹದಿಂದ ಜಪ ದಿಂದ ಅಲ್ಪ ಆಯಸ್ಸು ಮತ್ತು ಬುದ್ದಿವಂತ ಮಗು ಇರಲಿ ಎಂದು ಸ್ವೀಕಾರ ಮಾಡುತ್ತಾರೆ. ಮುಂದೆ ತಂದೆ ತೀರಿ ಹೋಗುತ್ತಾರೆ. ಶಂಕರರಿಗೆ 8 ನೇ ವಯಸ್ಸು. ಇವರಿಗೆ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ.ಲೌಕಿಕ ಮೋಹದ ಮೊಸಳೆ ಹಿಡಿತದಿಂದ ಬಚಾವ್ ಆಗಬೇಕು ಎಂದರೆ ಸನ್ಯಾಸದ ಆಧ್ಯಾತ್ಮಿಕ ಹಾದಿ ಕಡೆ ಹೆಜ್ಜೆ ಇಡಬೇಕ ಅಥವಾ ಮೊಸಳೆ ಗೆ ಕೊಡತಿಯ ಎಂದು ಕೇಳಿದ ಕಂದ.

ಜೀವನೇ ಮುಖ್ಯ ಆಗಿತ್ತು ಹೆತ್ತ ಕರುಳಿಗೆ. ಸರಿಯಪ್ಪ ನೀನು ಸನ್ಯಾಸಿ ಆಗು ಎಂದು ಹೇಳುತ್ತಾಳೆ ಶಂಕರರ ತಾಯಿ. ಇದು ಶಂಕರರು ಆಗಿದ್ದ ಸಂಪೂರ್ಣ ಕಥೆ.ಕೇರಳದ ನರ್ಮದಾ ತೀರಕ್ಕೆ ಬಂದರು ಶಂಕರರು.ಸಂನ್ಯಾಸ ಸ್ವೀಕರಿಸಿದ ಶಂಕರರು ತಮಗೆ ತಕ್ಕ ಗುರುಗಳನ್ನು ಅರಸುತ್ತಾ ಉತ್ತರದ ನರ್ಮದಾ ನದಿಯ ತಟದಲ್ಲಿದ್ದ ಗೋವಿಂದ ಭಗವತ್ಪಾದರನ್ನು ಕಂಡರು. ಅವರು ಇವರ ಪರಿಚಯ ಕೇಳಲು,ಅದ್ವೈತ ತತ್ವಾರ್ಥವಿರುವ ಶ್ಲೋಕದಲ್ಲಿ ಶಂಕರರು ಉತ್ತರಿಸಿ ನಮಸ್ಕರಿಸಿದರು.

ಗೋವಿಂದ ಭಗವತ್ಪಾದರು ಮೆಚ್ಚಿ ಒಪ್ಪಲು, ಅವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿದರು. ಗೋವಿಂದ ಭಗವತ್ಪಾದರು ಗೌಡಪಾದ ಮುನಿಗಳ ಶಿಷ್ಯರು. ಗೌಡ ಪಾದ ಮುನಿಗಳು ಮಾಂಡೂಕ್ಯ ಉಪನಿತ್ತಿಗೆ ಭಾಷ್ಯ ಬರೆದು, ಅದಕ್ಕೆ ಅದ್ವೈತ ಸಿದ್ಧಾಂತದ ಕಾರಿಕೆಯನ್ನು ೫೨ ಶ್ಲೋಕಗಳಲ್ಲಿ ಬರೆದಿದ್ದಾರೆ. ಅದನ್ನೇ ವಿಸ್ತರಿಸಿ ಬ್ರಹ್ಮ ಸೂತ್ರಕ್ಕೆ ಭಾಷ್ಯವನ್ನು ಬರೆಯಲು ಗೋವಿಂದ ಭಗವತ್ಪಾದರು ತಮ್ಮಲ್ಲಿ ಅಭ್ಯಾಸ ಮಾಡಿ ಮುಗಿದ ನಂತರ ಶಂಕರರಿಗೆ ಹೇಳಿದರು. ಶಂಕರರು ಒಪ್ಪಿ ಕಾಶಿಗೆ ಹೊರಟರು.ಅದ್ವೈತ ಸಿದ್ದಾಂತದ ಪ್ರತಿಪಾದನೆ ಇವರ ಮುಖ್ಯ ಉದ್ದೇಶವಾಗಿತ್ತು.

ಇಂತಹ ಪ್ರತಿಭಾವಂತ ಶಂಕರರು ಬಾಲ ಸನ್ಯಾಸಿ ಆಗಿದ್ದಾಗ ಒಮ್ಮೆ ಭಿಕ್ಷೆಗೆ ಹೋಗಿರುತ್ತರೆ. ಬಡ ಮಹಿಳೆ ಹತ್ತಿರ ಹೋಗಿ ಭವತಿ ಭೀಕ್ಷಾದೇವಿ ಎಂದಾಗ ಅವರ ಮನೆಯಲ್ಲಿ ಏನು ಇಲ್ಲದೆ ಇರುವಾಗ ನೆಲ್ಲಿಕಾಯಿಯನ್ನು ನೀಡುತ್ತಾರೆ. ಅದನ್ನು ನೋಡಿ ಅವರಿಗೆ ನೋವು ಆಯಿತು. ನಂತರ ಶಂಕರರು ಸಿರಿ ದೇವಿ ಮಹಾಲಕ್ಷ್ಮಿಯನ್ನು ನೆನೆದರು. ಆ ಸಮಯದಲ್ಲಿ ಅಕ್ಷರವನ್ನು ಜೋಡಿಸಿ ಒಂದು ಸೂತ್ರವನ್ನು ಮಾಡಿದರು. ಈ ಸೂತ್ರದಿಂದ ಸತೃಪ್ತಿಯಾದ ಲಕ್ಷ್ಮಿ ಮಗು ನಿನಗೆ ಏನು ಬೇಕು ಎಂದು ಕೇಳುತ್ತಾಳೆ.

ಆಗ ಶಂಕರರು ನನಗೆ ಏನು ಬೇಡ ಮಾತೇ ಈ ಬಡ ವೃದ್ಧಿಯನ್ನು ಉದ್ದಾರ ಮಾಡು ಎಂದು ಕೇಳುತ್ತಾನೆ.ಈ ಮಹಿಳೆಗಾಗಿ ಭಗವತಿಯನ್ನೇ ಧರೆಗೆ ಇಳಿಸಿದರು ಶಂಕರಾಚಾರ್ಯರು. ಆ ಬಡ ವೃದ್ಧಿ ಮನೆಯ ಮೇಲೆ ಸಿರಿಯೆ ಸುರಿಯಿತು.ಶಂಕರರ ಸೂತ್ರದಿಂದ ಈ ರೀತಿ ಹೆರಾಳವಾಗಿ ಧನಕನಕ ಸುರಿದಿರುವುದರಿಂದ ಇದಕ್ಕಾಗಿ ಈ ಸೂತ್ರಕ್ಕೆ ಕನಕ ಸಸೋತ್ರ ಎಂದು ಹೆಸರು ಬಂತು. ಇಂದು ಈ ಸ್ಥಳ ಒಂದು ದೇವಾಲಯವಾಗಿದೆ. ಇದನ್ನು ಸ್ವರ್ಣದ ಮನೆ ಎಂದು ಕರೆಯಲಾಗುತ್ತದೆ.

Leave A Reply

Your email address will not be published.