ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ಬಾಳೆಹಣ್ಣನ್ನು ಹಿಂದೆ ಮುಂದೆ ನೋಡದೆ ತಿಂದುಬಿಡುತ್ತಾರೆ. ಅದರೆ ಬಾಳೆಹಣ್ಣು ತಿನ್ನುವುದರಿಂದ ಹಲವಾರು ಅಡ್ಡ ಪರಿಣಾಮಗಳು ಇದೆ ಎಂದು ಹೇಳುತ್ತಾರೆ. ಜಾಸ್ತಿ ಬಾಳೆಹಣ್ಣು ತಿಂದರೆ ಹಲವಾರು ರೀತಿಯ ಅಡ್ಡ ಪರಿಣಾಮ ಎದುರು ಆಗುತ್ತದೆ.
ಇನ್ನು ನಿಮಗೆ ಆಗಾಗ ತಲೆ ನೋವು ಬರುತ್ತಿದ್ದಾರೆ , ಸಾಧ್ಯವಾದಷ್ಟು ಮಟ್ಟಿಗೆ ಬಾಳೆಹಣ್ಣು ತಿನ್ನುವುದನ್ನು ಕಡಿಮೆ ಮಾಡಿ. ಈ ಸಮಸ್ಯೆ ಇದ್ದವರು ಜಾಸ್ತಿ ಬಾಳೆಹಣ್ಣು ತಿಂದರೆ, ಮುಂದಿನ ದಿನಗಳಲ್ಲಿ, ಇದೇ ತಲೆನೋವು ಮೈಗ್ರೇನ್ ರೂಪವಾಗಿ ಬದಲಾಗುವ ಸಾಧ್ಯತೆ ಇದೆಯಂತೆ!
ಇನ್ನು ಕೆಲವರಿಗೆ ಕೆಲವರಿಗೆ ಆಲ್ಕೋಹಾಲ್ ಸೇವನೆ ಮಾಡುವ ಸಂದರ್ಭದಲ್ಲಿ ಬಾಳೆಹಣ್ಣನ್ನು ಜೊತೆಗೆ ಸೇವಿಸುವ ಅಭ್ಯಾಸ ಇರುತ್ತದೆ. ಇದು ಒಂದು ರೀತಿಯಲ್ಲಿ ಅಚ್ಚರಿ ಎನಿಸಿದರೂ ಕೆಲವರು ಹೀಗೂ ಇರುತ್ತಾರೆ! ಆದ್ರೆ ಇದೇ ಕೆಟ್ಟ ಚಟದಿಂದ, ಮೈಗ್ರೇನ್ ಸಮಸ್ಯೆ ಅವರಲ್ಲಿ ಹೆಚ್ಚಾಗುತ್ತದೆಯಂತೆ.
ನೋಡಲು ತುಂಬಾ ಸಣ್ಣಗೆ ಇದ್ದವರಿಗೆ, ದಿನಕ್ಕೆ ಒಂದು ಬಾಳೆಹಣ್ಣು ಆದರೂ ತಿನ್ನು, ದಪ್ಪ ಆಗುತ್ತೀಯ ಎಂದು ಹೇಳುವುದನ್ನು ನೀವು ಕೇಳಿರಬಹುದು. ಬಾಳೆಹಣ್ಣಿನಲ್ಲಿ ಮುಖ್ಯವಾಗಿ ಕ್ಯಾಲೋರಿ ಅಂಶಗಳು ಜಾಸ್ತಿ ಇರುವುದರಿಂದಾಗಿ ಅತಿಯಾಗಿ ತಿಂದರೆ, ಇದರಿಂದ ದೇಹ ತೂಕ ವಿಪರೀತವಾಗಿ ಜಾಸ್ತಿ ಆಗುವ ಅಪಾಯವಿದೆ! ಈ ವಿಷ್ಯ ನೆನಪಿರಲಿ ಯಾವಾಗ ವ್ಯಕ್ತಿ ತನ್ನ ಪ್ರತಿದಿನದ ಅಗತ್ಯತೆಯನ್ನು ಮೀರಿ ಕ್ಯಾಲೋರಿಗಳ ಸೇವನೆಗೆ ಮುಂದಾಗುತ್ತಾನೆ ಆಗ ವ್ಯಕ್ತಿಯ ದೇಹದ ತೂಕದಲ್ಲಿ ಏರಿಕೆ ಕಾಣಬಹುದು.
ಕಟ್ಟ ಜೀವನ ಶೈಲಿ ಹಾಗೂ ಸರಿಯಾದ ಆಹಾರಕ್ರಮ ಅನುಸರಿಸದೇ ಇದ್ದರೆ, ಮಧುಮೇಹದ ಅಪಾಯ ಇರುತ್ತದೆ ಎಂಬುದನ್ನು ನಾವು ಕೇಳಿದ್ದೇವೆ ಅಲ್ಲವೇ? ಆದ್ರೆ ಅಚ್ಚರಿ ಏನೆಂದರೆ ಜಾಸ್ತಿ ಬಾಳೆಹಣ್ಣು ತಿಂದರೂ ಕೂಡ ಟೈಪ್ 2 ಮಧುಮೇಹ ಆವರಿಸುವ ಸಂಭವ ಜಾಸ್ತಿ ಇರುತ್ತದೆಯಂತೆ!
ಇದಕ್ಕೆ ಮುಖ್ಯ ಕಾರಣಗಳನ್ನು ನೋಡುವುದಾದರೆ ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಮತ್ತು ಗ್ಲೈಸೆಮಿಕ್ ಸೂಚ್ಯಂಕ, ಹೇರಳವಾಗಿ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇರುತ್ತದೆ.ಇನ್ನೊಂದು ಅಪಾಯಕಾರಿ ಸಂಗತಿ ಏನೆಂದರೆ, ದಿನನಿತ್ಯ ಅತಿಯಾಗಿ ಬಾಳೆಹಣ್ಣು ಸೇವಿಸಿದರೆ ಮಧುಮೇಹ ಸಮಸ್ಯೆ ಇಲ್ಲದವರಿಗೂ ಕೂಡ, ಮುಂಬರುವ ದಿನಗಳಲ್ಲಿಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಬಾಳೆ ಗಿಡದ ಹೂವು ಈ ಕಾಯಿಲೆಗೆ ತುಂಬಾ ಒಳ್ಳೆಯದು..-ಬಾಳೆ ಗಿಡ ಎಂದ ತಕ್ಷಣ ನಮಗೆ ಮೊದಲಿಗೆ ನೆನಪಾಗೋದು ಬಾಳೆ ಹಣ್ಣು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಾಳೆಹಣ್ಣನ್ನು ಸೇವನೆ ಮಾಡಿರುತ್ತಿರ ಮತ್ತು ಇದರ ಔಷಧೀಯ ಗುಣಗಳನ್ನು ಸಹ ತಿಲಿದಿರುತ್ತಿರಿ. ಆದ್ರೆ ಬಾಳೆಹಣ್ಣಿನ ಹೂವಿನಲ್ಲಿ ಕೂಡ ಅತ್ಯುತ್ತಮವಾದ ಔಷದೀಯ ಗುಣಗಳನ್ನು ಹೊಂದಿದೆ. ಹೌದು ಸ್ನೇಹಿತರೆ ಈ ಬಾಳೆಹಣ್ಣಿನ ಹೂವನ್ನು ಬಾಳೆಹಣ್ಣಿನ ಹೃದಯ ಎಂದು ಕರೆಯುವುದು ಉಂಟು. ಇದ್ರಲ್ಲಿ ಉತ್ತಮವಾದ ಪೌಷ್ಟಿಕಾಂಶಗಳು ಇವೆ. ಈ ಬಾಳೆ ಹೂವಿನಲ್ಲಿ ರಂಜಕ,ಕ್ಯಾಲ್ಸಿಯಂ, ಪೊಟ್ಯಾಸಿಯಂ, ತಾಮ್ರ, ಮಾಗ್ನೆಸಿಯಮ್ ಮತ್ತು ಕಬ್ಬಿಣದಂತಹ ಅಗತ್ಯ ಖನಿಜಗಳು ಸಹ ತುಂಬಿದೆ. ಇದನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು ಹಾಗೂ ಹಲವಾರು ಕಾಯಿಲೆಗಳನ್ನು ಕೂಡ ನಿವಾರಣೆ ಮಾಡುವ ಶಕ್ತಿ ಈ ಬಾಳೆಹಣ್ಣಿನ ಹೂವಿಗೆ ಇದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಸಕ್ಕರೆ ಕಾಯಿಲೆ ಅನ್ನುವುದು ಸಾಮಾನ್ಯ ಕಾಯಿಲೆ ಆಗಿ ಮಾರ್ಪಟ್ಟಿದೆ. ಈ ಸಮಸ್ಯೆ ಕಾಣಿಸಿಕೊಂಡರೆ ರಕ್ತದಲ್ಲಿರುವ ಸಕ್ಕರೆ ಅಥವಾ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಮತ್ತು ಆಹಾರದ ಮೂಲಕ ದೇಹ ಸೇರುವ ಗ್ಲುಕೋಸ್ ಅಂಶವನ್ನು ಇನ್ಸುಲಿನ್ ಎಂಬ ಹಾರ್ಮೋನ್ ದೇಹದ ಜೀವಕೋಶಗಳಿಗೆ ತಲುಪುವಂತೆ ಮಾಡುತ್ತದೆ. ಆದ್ರೆ ನಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ದೇಹದ ಪ್ರಮುಖ ಭಾಗಗಳಿಗೆ ಅನೇಕ ಬಾರಿ ಹಾನಿ ಆಗುತ್ತದೆ ಹೀಗಾಗಿ ಸಕ್ಕರೆ ಕಾಯಿಲೆ ಇದ್ದವರು ಆಹಾರ ಕ್ರಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದ್ರೆ ಈ ಸಮಸ್ಯೆ ಇಂದ ಬಳಲುವವರು ಕೆಲ ಆಹಾರಗಳನ್ನು ಸೇವನೆ ಮಾಡುವುದರಿಂದ ಅಥವಾ ಕುಡಿಯುವುದರಿಂದ ದೇಹದಲ್ಲಿ ಇರುವ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿ ಅತಿಯಾದ ಗ್ಲೂಕೋಸ್ ಹೆಚ್ಚಾದರೆ ಕಣ್ಣಿನ ಸಮಸ್ಯೆ, ಮೂತ್ರ ಪಿಂಡದ ಸಮಸ್ಯೆಗಳು, ನರಗಳಿಗೆ ಹಾನಿಯಾಗಬಹುದು.
ಹೀಗಾಗಿ ಸಕ್ಕರೆ ಕಾಯಿಲೆ ಇದ್ದವರು ನೈಸರ್ಗಿಕವಾಗಿ ಸಿಗುವ ಗಿಡ ಮೂಲಿಕೆಗಳ ಉಪಯೋಗ ಮಾಡಿಕೊಂಡು ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇನ್ನೂ ಸಕ್ಕರೆ ಕಾಯಿಲೆ ಇದ್ದವರು ಇದನ್ನು ಯಾವ ರೀತಿ ಸೇವನೆ ಮಾಡಬೇಕು ಎಂದು ನೋಡುವುದಾದರೆ, ನೀವು ಇದನ್ನು ಪಲ್ಯದ ರೂಪದಲ್ಲಿ ಸಹ ಸೇವನೆ ಮಾಡಬಹುದು. ಬಾಳೆ ಹಣ್ಣಿನ ಹೂವನ್ನು ತಂದು ಅದನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ನೀವು ಮಾಡುವಂತಹ ತರಕಾರಿ ಪಲ್ಯದಲ್ಲಿ ಸ್ವಲ್ಪ ಸೇರಿಸಿ ಇದನ್ನು ಸೇವನೆ ಮಾಡಬಹುದು ಅಥವಾ ಸಲಾಡ್ ರೂಪದಲ್ಲಿ ಕೂಡ ಇದನ್ನು ಕೂಡ ಸೇವನೆ ಮಾಡಬಹುದು.
ಇದನ್ನು ನಿಮ್ಮ ತೂಕವನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಹೂವಿನಲ್ಲಿ ಇರುವ ಪೌಷ್ಟಿಕಾಂಶಗಳು ಸಮೃದ್ಧವಾಗಿ ಇರುವುದರಿಂದ ಇದು ತೂಕ ಇಳಿಸಲು ಸಹ ಸಹಕಾರಿ ಆಗಿದೆ. ತೂಕ ಇಳಿಕೆಗೆ ಬಾಳೆಹಣ್ಣಿನ ಸಲಾಡ್ ಅಥವಾ ಸೂಪ್ ನ್ನೂ ಸೇವನೆ ಮಾಡುವುದು ಬಹಳ ಸೂಕ್ತ. ಇನ್ನೂ ನೀವು ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ಒತ್ತಡ ಕಡಿಮೆ ಆಗಿ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿ ಇರುವ ಮೆಗ್ನೀಸಿಯಂ ನಮ್ಮ ದೇಹದಲ್ಲಿರುವ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡಿ ನಮ್ಮನ್ನು ಖಿನ್ನತೆ ಇಂದ ಹೊರಗೆ ಬರಲು ಸಹಾಯ ಮಾಡುತ್ತದೆ.
ಈ ಬಾಳೆ ಹೂವು ಉತ್ಕರ್ಷಕ ನಿರೋಧಕ ಗುಣಗಳನ್ನು ಹೊಂದಿದೆ ಇದರಿಂದ ಅಲ್ಜಿಮಲ್ ಅಂತಹ ಸಮಸ್ಯೆಗಳು ಬರುವುದು ಕಡಿಮೆ ಆಗುತ್ತದೆ. ಇದು ನಿಮ್ಮ ಜೀರ್ಣ ಕ್ರಿಯೆಗೆ ಒಳ್ಳೆಯದು. ಈ ಹೂವಿನಲ್ಲಿರುವ ಉತ್ತಮವಾದ ಫೈಬರ್ ಅಂಶ ನಮ್ಮ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ ಜೊತೆಗೆ ಹೊಟ್ಟೆಯಲ್ಲಿ ಆಹಾರ ಹೀರಿಕೊಳ್ಳಲು ಉತ್ತೇಜಿಸುತ್ತದೆ. ಈ ಬಾಳೆಹಣ್ಣಿನ ಹೂವಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಇರುವುದರಿಂದ ಇದು ನಮ್ಮ ಸಂಪೂರ್ಣ ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಚರ್ಮದ ಮೇಲೆ ಆದ ಸೋಂಕುಗಳು, ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.