ಈ ತಪ್ಪುಗಳನ್ನು ಮಾಡಿದರೆ ಮುಖದ ಅಂದ ಹಾಳಾಗುತ್ತದೆ!
ಸ್ಕಿನ್ ಚೆನ್ನಾಗಿ ಇರಬೇಕು ಎಂದು ನಾನಾ ರೀತಿಯ ಪ್ರಡಕ್ಟ್ ಗಳನ್ನು ಬಳಸುತ್ತೇವೆ. ಅದರೆ ಸ್ಕಿನ್ ಬಗ್ಗೆ ಕಾಳಜಿವಹಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಿಬಿಡುತ್ತೇವೆ.ಇದು ಮುಖದ ಅಂದವನ್ನು ಹಾಳುಮಾಡುತ್ತವೆ. ಮುಖದಲ್ಲಿ ಕಲೆ ಮೊಡವೆಗಳು ಕಂಡು ಬರುತ್ತವೆ.
1, ಹಣೆಯ ಬೋಟ್ಟನ್ನು ಬಳಸಿದ ನಂತರ ಕನ್ನಡಿ ಮತ್ತು ಗೋಡೆಯ ಮೇಲೆ ಅಂಟಿಸುವುದು ಮತ್ತು ನಂತರ ಅದೇ ಬೋಟ್ಟನ್ನು ಹಣೆಗೆ ಇಡುವುದು. ಈ ರೀತಿ ಮಾಡಿದರೆ ಗೋಡೆಯ ಮೇಲೆ ಅಂಟಿಸಿದ ಬೋಟ್ಟಿನಲ್ಲಿ ದೂಳು ಕ್ರಿಮಿ ಕೀಟಗಳು ಆಂಟಿಕೊಂಡಿರುತ್ತವೆ. ಇದರಿಂದ ನಿಮಗೆ ತುರಿಕೆ ಮೊಡವೆ ಮೊದಲಾದ ತೊಂದರೆ ಎದುರು ಆಗುತ್ತದೆ. ಆದ್ದರಿಂದ ಈ ರೀತಿ ತಪ್ಪನ್ನು ಮಾಡಬಾರದು.
2,ಮುಖವನ್ನು ಚೆನ್ನಾಗಿ ಸ್ವಚ್ಛವಾಗಿ ತೊಳೆಯದೆ ಇರುವುದು.ನೀವು ಮನೆಯಲ್ಲಿ ಇರುವ ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆಯಿರಿ ಅಥವಾ ಕಾಸ್ಟ್ಲಿ ಫೇಸ್ ವಾಶ್ ಯಿಂದ ಫೇಸ್ ವಾಶ್ ಮಾಡಿ. ಅದರೆ ಸರಿಯಾಗಿ ಡೀಪ್ ಆಗಿ ಕ್ಲೀನ್ ಮಾಡಿದರೆ ಉತ್ತಮ ಫಲಿತಾಂಶ ಕಂಡು ಬರುತ್ತದೆ. ಆದಷ್ಟು 20 sec ಚೆನ್ನಾಗಿ ಕ್ಲೀನ್ ಮಾಡಬೇಕು.
3,ಮೊಬೈಲ್ ಫೋನ್ ಬಳಕೆ-ಹೆಚ್ಚು ಬಳಸುವ ಎಲೆಕ್ಟ್ರಾನಿಕ್ಸ್ ಉತ್ಪನ್ನ ಎಂದರೆ ಮೊಬೈಲ್. ಆದಷ್ಟು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.ಏಕೆಂದರೆ ಇದರಲ್ಲಿ ದೂಳು ಮತ್ತು ಕಣ್ಣಿಗೆ ಕಾಣದ ಬಾಕ್ಟೆರಿಯ ಗಳು ಮೊಬೈಲ್ ಫೋನ್ ಮೇಲೆ ಅಂಟಿಕೊಂಡಿರುತ್ತದೆ. ಇದನ್ನು ಮುಖಕ್ಕೆ ತಾಗಿಸಿದಾಗ ಮೊಡವೆಗಳು ಶುರು ಆಗುತ್ತವೆ.
4,ಸನ್ ಕ್ರಿಮ್ ಅಚ್ಚದೆ ಇರುವುದು-ಶೇಕಡಾ 80% ಸ್ಕಿನ್ ಸಮಸ್ಸೆ ಬರುವುದೇ ಸೂರ್ಯನ ಕಿರಣಗಳಿಂದ. ಇದರಿಂದ ಮುಖ ಕಪ್ಪಗೆ ಆಗುತ್ತಾದೇ ನೆರಿಗೆಗಳು ಬರುತ್ತವೆ. ಆದ್ದರಿಂದ ಸನ್ ಕ್ರಿಮ್ ಅನ್ನು ಬಳಕೆ ಮಾಡಿ.
5,ದಿಂಬು ಕವರ್ ಅನ್ನು ಬದಲಾಯಿಸದೆ ಇರುವುದು.-ಮುಖದ ಅಂದ ಚೆನ್ನಾಗಿ ಇರಬೇಕು ಎಂದರೆ ದಿಂಬು ಕವರ್ ಅನ್ನು ಬದಲಾಯಿಸಬೇಕು. ವಾರದಲ್ಲಿ ಒಂದು ಬಾರಿ ದಿಂಬು ಕವರ್ ಅನ್ನು ಬದಲಾಯಿಸಬೇಕು.