ಮಧ್ಯರಾತ್ರಿಯಲ್ಲಿ ಪ್ರತ್ಯಕ್ಷವಾಗಿದ್ದ ತಿಮ್ಮಪ್ಪ.!ತಿರುಪತಿಯ ಈ ಪವಾಡ ಕೇಳಿದ್ರೆ ಮೈ ಜುಮ್ಮನ್ಸುತ್ತೆ!

0 21,858

ಕನಕದಾಸರು ಎಂದು ಹೆಸರು ಕೇಳಿದಾಗ ಮೊದಲು ನೆನಪು ಆಗುವುದು ಉಡುಪಿಯಲ್ಲಿನ ಕನಕನ ಕಿಂಡಿ.ಇಲ್ಲಿ ಕನಕ ದಾಸರಿಗೆ ಆದ ಅಪಮಾನ. ನಂತರ ಸಾಕ್ಷಾತ್ ಶ್ರೀ ಕೃಷ್ಣನೇ ಇವರಿಗೋಸ್ಕರ ದರ್ಶನ ಕೊಟ್ಟಿದ್ದು. ಎಲ್ಲಾರು ಕನಕದಾಸರ ಮಹಿಮೆ ನೋಡಿ ಬೆಚ್ಚಿಬಿದ್ದರು. ಇಂತಹದೆ ಒಂದು ಘಟನೆ ತಿರುಮಲದಲ್ಲಿ ನಡೆದಿದೆ. ಇಲ್ಲಿ ಸಾಕ್ಷಾತ್ ಶ್ರೀ ವೆಂಕಟೇಶ್ವರನೇ ಕನಕದಾಸರ ಬಳಿ ನಡೆದು ಬಂದಿದ್ದ.

ದಾಸರಲ್ಲಿ ದಾಸರು ಕನಕದಾಸರ ವೈಶಿಷ್ಟ. ಗುಣಕ್ಕಿಂತ ಕುಲವೇ ಮುಖ್ಯ ಎಂದು ಹೇಳುವವರನ್ನ ಕುಲವದ ನೆಲೆಯನ್ನು ನೀವು ಬಲ್ಲಿರಾ ಎಂದು ಕೇಳಿದ ಮಹಾನ್ ವ್ಯಕ್ತಿ ಇವರು.ಒಮ್ಮೆ ಕನಸಲ್ಲಿ ಸಾಕ್ಷಾತ್ ವೆಂಕಟೇಶ್ವರನೇ ದರ್ಶನ ಕೊಟ್ಟ. ಕನಕ ಬಾರೋ ನನ್ನ ಕಲ್ಯಾಣ ಕ್ರಾಂತಿಯನ್ನು ನೋಡು ಬಾ ಎಂದು ಪದೇ ಪದೇ ಕನಸಲ್ಲಿ ಬಂದು ಕಾಡುವುದಕ್ಕೆ ಶುರು ಮಾಡಿದ. ನಂತರ ತಿರುಮಲಕ್ಕೆ ಹೊರಟರು ಕನಕದಾಸರು. ಬೆಟ್ಟವನ್ನು ಹತ್ತುವಾಗಲೇ ವೆಂಕಟೇಶ್ವರ ಹಿಂದಿನ ದಿನ ದೇವಸ್ಥಾನ ಮುಖ್ಯಸ್ಥನ ಕನಸಲ್ಲಿ ಬಂದು ನನ್ನ ಪರಮ ಭಕ್ತನದ ಕನಕದಾಸ ನನ್ನ ಕ್ಷೇತ್ರಕ್ಕೆ ಬರುತ್ತಿದ್ದಾನೆ ಅವನನ್ನು ಗುರುತಿಸಿ ಬರಮಾಡಿಕೊಂಡು ಸತ್ಕಾರಿಸು ಎಂದು ಸೂಚನೆ ಕೊಟ್ಟಿದ್ದ.

ಮಾರನೇ ದಿನ ಕನಕದಾಸರನ್ನು ಕಂಡು ಮಾತನಾಡಿಸಿದ. ನಂತರ ಜೊತೆಯಲ್ಲಿ ನಡೆಯುತ್ತಿರುವವರನ್ನು ನೋಡಿದ ಅವರು ಸುಸ್ತು ಆಗಿದ್ದನ್ನು ಕಂಡು ಗೋವಿಂದ ಗೋವಿಂದ ಎಂದು ಹಾಡು ಏಳುತ್ತ ಹೋರಾಟ. ಇವರ ಹಾಡನ್ನು ಕೇಳಿ ಉತ್ತೇಜಿತರಾಗಿ ಅವರು ಕೂಡ ಗೋವಿಂದ ಗೋವಿಂದ ಎಂದು ಹೇಳಲು ಶುರು ಮಾಡಿದರು. ಇದರಿಂದ ಇತರರ ನೋವು ಆಯಾಸ ಕಡಿಮೆಯಾಗಿ ಬೆಟ್ಟ ಹತ್ತಿದ್ದು ಅವರಿಗೆ ಗೊತ್ತು ಆಗಲಿಲ್ಲ.

ಕನಕದಾಸರಿಗೆ ಅಂದು ಪ್ರವೇಶ ಸಿಗಲಿಲ್ಲ. ಬೆಟ್ಟದಲ್ಲಿ ಇದ್ದು ನಾಳೆ ದರ್ಶನ ಮಾಡುವ ಎಂದರೆ ಯಾವ ಛತ್ರದಲ್ಲಿ ಕೂಡ ಸ್ಥಳ ಸಿಗಲಿಲ್ಲ.ಹಸಿದಾಗ ಹೊಟ್ಟೆ ಒಂದು ತುತ್ತು ಊಟ ಕೂಡ ಇರಲಿಲ್ಲ. ಇಷ್ಟೆಲ್ಲಾ ನೋಡಿದ ದಾಸರಿಗೆ ಪರಮಾತ್ಮ ಕನಸಲ್ಲಿ ಹೇಳಿದ್ದು ನೆನಪು ಆಯಿತು. ವಿಪರೀತ ಚಳಿ ನಡುಗುತ್ತಾ ಮಲಗಿದ್ದರು ಕನಕದಾಸರು. ದೇವರ ಪರಿಚಯಕ ಒಬ್ಬ ಬಂದು ಕನಕದಾಸರನ್ನು ಎಬ್ಬಿಸಿದ. ಹಸುವಿನಲ್ಲಿ ಮಲಗಿದ್ದ ಕನಕದಾಸರಿಗೆ ಬಿಸಿ ಬಿಸಿ ಹಾಲು ಕೊಟ್ಟ. ಇಷ್ಟು ಹೊತ್ತು ಆದರೂ ಯಾರು ಬಂದಿರಲಿಲ್ಲ. ಅದರೆ ಇಂತಹ ಮಧ್ಯರಾತ್ರಿಯಲ್ಲಿ ಉಪಚಾರ ಮಾಡುತ್ತಿರುವವನು ನೀನು ಯಾರು ಎಂದು ಕೇಳಿದರು ದಾಸರು.

ಬೆಟ್ಟ ಹತ್ತುವಾಗ ಕೇಳಿದಾಗ ಮುಂದೆ ಹೋಗುವವರಿಗೆ ಹಿಂದಿನವ ಹಿಂದೆ ಬರುವವರಿಗೆಲ್ಲ ಮುಂದಿನ ಎಂದು ದಾಸರು ಒಗಟಾಗಿ ಮಾತನಾಡಿದ್ದು ನೆನಪು ಆಯಿತು ಗೋವಿಂದನಿಗೆ. ತನ್ನ ಭಕ್ತರು ಹೀಗೆ ಇರುವಾಗ ತಾನು ಸಾಮನ್ಯನೇ. ದಾಸರೊಂದಿಗೆ ತಮಾಷೆ ಮಾಡಬೇಕು ಎಂದು ಅನಿಸಿತು ಗೋವಿಂದ ನಿಗೆ.ಯಾರಯ್ಯ ಎಂದು ಕೇಳಿದ ಕನಕದಾಸರಿಗೆ “ನಾನು ನಾನೆ”ಎಂದು ಹೇಳಿ ನಸು ನಕ್ಕು ಅಲ್ಲಿಂದ ಹೊರಟು ಹೋದ ವೆಂಕಟೇಶ.

ಅರೆ ನಿದ್ರೆಯಲ್ಲಿ ಇದ್ದ ದಾಸರು ಎಲ್ಲ ಶ್ರೀನಿವಾಸನಾ ಇಚ್ಛೆ ಎಂದು ಮತ್ತೆ ನಿದ್ರೆಗೆ ಜಾರಿಬಿಟ್ಟರು. ಬೆಳಗು ಆಗುವಲ್ಲಿ ತಿರುಮಲದಲ್ಲಿ ಗದ್ದಲೋ ಗದ್ದಲ. ದೇವರಿಗೆ ಉಡಿಸಿದ ಮೂಲ ದ್ರೋತ್ರವೇ ಇಲ್ಲವಾಗಿದೆ.ಇದು ಹೇಗೆ ಸಾಧ್ಯ ಇದನ್ನು ಮಾಡಿದವರು ಯಾರು ಎಂದು ದೊಡ್ಡ ಧ್ವನಿಯಲ್ಲಿ ಗಲಾಟೆ ಶುರು ಮಾಡಿದರು ಅರ್ಚಕರು. ನಂತರ ಒಂದು ಸುದ್ದಿ ಬಂತು. ನಡು ದಾರಿಯಲ್ಲಿ ದಾರಿಹೋಕ ಮಲಗಿದ್ದಾನೆ ಅವನ ಮೇಲೆ ದ್ರೋತ್ರಿ ಇದೆ ಎಂದು ಹೇಳಿದರು.

ಕೂಡಲೇ ಭಟ್ಟರು ಅಲ್ಲಿಗೆ ಹೋದರು. ದಾಸರು ಕಳ್ಳ ಎಂದು ಭಾವಿಸಿ ಒಡೆಯುವುದಕ್ಕೆ ಶುರು ಮಾಡಿದರು. ನಂತರ ಕಂಬಕ್ಕೆ ಕಟ್ಟಿ ಹಾಕಿದರೂ.ಭಗವಂತನಾ ಎದುರು ಚಾಟಿ ಏಟು ಶುರು ಆಯಿತು. ಬೆಟ್ಟ ಹತ್ತುವಾಗ ಸಿಕ್ಕಿದ ವ್ಯಕ್ತಿ ನಾನು ಬರುವಾಗ ನಾನು ಇವನನ್ನು ನೋಡಿದೆ ಮಾತನಾಡಿಸಿದ್ದೆ. ಒಗಟಿನಿಂದ ಮಾತನಾಡಿದ ಕಳ್ಳ ಇವನಿಗೆ ಒಡೆಯಿರಿ. ಇಷ್ಟೆಲ್ಲಾ ಆದ ಕನಕದಾಸರಿಗೆ ರಾತ್ರಿ ನಡೆದ ಘಟನೆ ನೆನಪಿಗೆ ಬಂತು. ಅಪ್ಪ ವೆಂಕಟಪ್ಪ ವಿಚಾರಿಸಿದವರಿಗೆ ಒಗಟಗಿ ಉತ್ತರಿಸಿದೆ.

ನಿನ್ನನ್ನು ವಿಚಾರಿಸಲು ಹೊರಟೆ ನಿನ್ನ ಕಲ್ಯಾಣ ವೈಭವವನ್ನು ನಿಂದಿಸಿದೆ ಸಿಟ್ಟು ಬಂತೆ. ಇಂತಹ ಸಮಯದಲ್ಲಿ ದಾಸರಿಗೆ ಒಡೆದ ಏಟು ಶ್ರೀನಿವಾಸರಾ ಮೇಲೆ ಬಸುಂಡೆ ಮೂಡಲು ಶುರು ಆಯಿತು. ನಂತರ ಅವರಿಗೆ ತಿಳಿದು ಅಪಚರವಾಯಿತು. ಶ್ರೀ ವೆಂಕಟೇಶ್ವರ ಸ್ವಾಮಿ ಕನಸಿನಲ್ಲಿ ಬಂದು ಸೂಚನೆ ಕೊಟ್ಟಿದ್ದರು. ಇವರನ್ನು ಮಾತನಾಡಿಸಿದಾಗ ಏನು ಅರ್ಥ ಆಗಲಿಲ್ಲ. ನಂತರ ಭಟ್ಟರಿಗೆ ತಿಳಿಸಿ ಕನಕದಾಸರ ಭಕ್ತಿಯನ್ನು ಕೊಂಡಡಿದರು. ಇದು ತಿರುಮಲದಲ್ಲಿ ನಡೆದ ಕನಕದಾಸರ ಮಹಿಮೆ.

Leave A Reply

Your email address will not be published.