ಶಿವನ ಮಗಳು ನಾಗಮ್ಮ! ನೀವೆಲ್ಲರೂ ನಾಗರ ಕಲ್ಲಿನಲ್ಲಿ ನೋಡಿರೋ 3 ನಾಗಗಳ ಮಹಾ ದೈವ ರಹಸ್ಯ!

0 141

ಸರ್ಪಗಳು ಎಂದರೆ ನಮ್ಮ ಧರ್ಮದಲ್ಲಿ ಮಹತ್ವವಾದ ಸ್ಥಾನವಿದೇ. ಸಂತಾನದಿಂದ ಇಡಿದು ಕೆಲಸಗಳಲ್ಲಿ ಪದೇ ಪದೇ ಆಗೋ ವೈಫಲ್ಯಗಳ ವರೆಗೂ ಸರ್ಪ ದೋಷದ ನಂಟು ಬಿಚ್ಚಿಕೊಳ್ಳುತ್ತದೆ.ಶ್ರೀ ಸರ್ಪ ರಾಜ ಅಷ್ಟೊತ್ತರ ಅತ್ಯಂತ ಅಪರೂಪ ಮತ್ತು ವಿಶೇಷ ಪವಿತ್ರವಾದ ಮಂತ್ರ ಸಾಧನವಾಗಿದೆ. ಅನೇಕ ಚರಿತ್ರೆಗಳಲ್ಲಿ ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪ ರಾಜರ ಬಗ್ಗೆ ಮಾಹಿತಿ ಸಿಗುತ್ತದೆ. ನವ ನಾಗೇಂದ್ರರ ಹೆಸರುಗಳನ್ನೂ ಉಲ್ಲೇಖ ಮಾಡಲಾಗುತ್ತದೆ.

ಶ್ರೀ ಅನಂತ ವಾಸುಕಿ ,ಶ್ರೀ ತಕ್ಷಕ ,ಶ್ರೀ ವಿಶ್ವತೋಮುಖ, ಕರ್ಕೋಟಕ , ಮಹಾಪದ್ಮ ,ಪದ್ಮಶಂಖ ,ಧೃತರಾಷ್ಟ್ರರಾಯ ಹೀಗೆ ನವನಾಗರ ಹೆಸರುಗಳು ಬಹಳ ಪ್ರಸಿದ್ಧ. ಸರ್ಪ ರಾಜರ ಹೆಸರುಗಳು ಹೇಗೆ ವಿಶೇಷವೂ ಅದೇ ರೀತಿ ಹದಿನಾರು ಜನ ನಾಗ ಮಾತೆಯರು ಕೂಡ ಬಲು ವಿಶೇಷ ಶ್ರೀ ನಾಗ ಮಾತೆ ,ನಾಗಬಾಗಿಣಿ,ವಿಷಹರೇ, ಮೃತ ಸಂಜೆವಿನಿ, ಸಂಜೀವಿನಿ ,ಸಿದ್ದಯೋಗಿ ನಿ,ಯೋಗಿನಿ , ಪ್ರಿಯಾ ಜರಾತ್ಕಾರು, ಜಗದ್ ಗೌರಿ ,ಮನಸಾ ವೈಷ್ಣವಿ , ಆಸ್ತಿಕ ಮಾತಾ ,ವಿಶ್ವವರಾದೇವಿ ಇವರೆಲ್ಲರೂ ಕೂಡ ನಾಗ ಮಾತೆಯರು .ಸ್ತ್ರೀಯರು ಪ್ರತಿದಿವಸ ಈ ದೇವಿಯರ ದೇವಿಯರ ಸ್ಮರಣೆ ಮಾಡಿದರೆ ದೀರ್ಘ ಸುಮಂಗಲಿಯರು ಆಗುತ್ತಾರೆ .

ಮನೆಯಲ್ಲಿ ಗಂಡ ಹೆಂಡತಿ ಅನ್ಯೋನ್ಯವಾಗಿರುತ್ತಾರೆ ದಾಂಪತ್ಯ ಜೀವನ ಸುಖವಾಗಿರುತ್ತೆ ಎಂಬ ನಂಬಿಕೆಗಳಿವೆ. ನಾಗ ಸಂತುಷ್ಟಿಗಾಗಿ ಹಲವಾರು ಪೂಜೆ ಪುನಸ್ಕಾರಗಳಿವೆ. ಇದರಲ್ಲಿ ನಾಗ ಅಷ್ಟೋತ್ತರ ಓದುವುದು ಕೂಡ ಉತ್ತಮ ಆಯ್ಕೆ . ಈ ನಾಗರ ಅಷ್ಟೋತ್ತರವನ್ನು ಓದುವುದರಿಂದ ಏನೇನು ಲಾಭಗಳಿವೆ ಎಂದರೆ ಯಾರು ಪ್ರತಿದಿನವೂ ನವ ನಾಗೇಂದ್ರರು ಮತ್ತು ನಾಗ ಮಾತೆಯರನ್ನು ಸ್ಮರಿಸಿ ಸರ್ಪರಾಜ ಅಷ್ಟೋತ್ತರವನ್ನು ಓದುತ್ತಾರೋ ಅಂತಹವರ ಮನೆಯಲ್ಲಿ ಸರ್ಪ ದೇವರ ಆಶೀರ್ವಾದ ಸದಾಕಾಲ ಲಭಿಸುತ್ತದೆ.

ಸರ್ವ ಭಯ ಆ ಸರ್ಪಭಯ ಆ ಶತ್ರು ಭಯ ನಿವಾರಣೆಯಾಗುತ್ತದೆ. ನವ ನಾಗೇಂದ್ರರು ಮತ್ತು ನಾಗದೇವತೆಯ ಸ್ಮರಣೆ ಮಾಡಿ ಸರ್ಪರಾಜ ಅಷ್ಟೋತ್ತರ ಓದಿ ಹುತ್ತಕ್ಕೆ ನಮಸ್ಕಾರ ಮಾಡ್ತಾ ಬಂದ್ರೆ ಮನೆಯಲ್ಲಿ ಜಗಳ ನಿವಾರಣೆಯಾಗಿ ಸಂತೋಷದ ಜೀವನ ಮಾಡ್ತೀರಿ ,ಆರೋಗ್ಯವಾಗಿರುತ್ತೀರಿ, ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ಪೂಜೆ ಮಾಡ್ಸಿ ಸರ್ಪರಾಜ ಸ್ತೋತ್ರವನ್ನೂ ಓದಿ ಮಂಡಲ ಪೂಜೆ ಮಾಡಿದರೆ ಸಂತಾನ ಭಾಗ್ಯ ಲಭಿಸುತ್ತದೆ . ಗಂಡ ಹೆಂಡತಿ ವಿರಸ ಇರೋರು ವಿಚ್ಛೇದನ ಸಮಸ್ಯೆ ಇರೋರು ಸೃಷ್ಟಿ ಅಥವಾ ಅಷ್ಟಮಿಯ ದಿನ ನಾಗರಾಜನ ಅಷ್ಟೋತ್ತರ ಹೇಳಿ ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ .

ಯಾರಿಗೆ ಫಿಟ್ಸ್ ನಂತಹ ಕಾಯಿಲೆ ಇದೆಯೋ ಅಂತಹವರು ಓದಿದರೆ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಆಗುತ್ತದೆ. ಕಾಲ ಸರ್ಪದೋಷ ಇರೋರು ಓದಿದರೆ ಕಾಲ ಸರ್ಪದೋಷ ಕಾಲಸರ್ಪ ಯೋಗವಾಗಿ ಬದಲಾಗಿ ಉತ್ತಮವಾದ ಫಲವನ್ನು ಕೊಡುತ್ತದೆ .ಯಾವುದೇ ತರಹದ ಪಂಚಮ ರಾಹು, ಸಪ್ತಮ ರಾಹು ,ಅಷ್ಟಮ ರಾಹು ದೋಷ ಗಳು ಕೂಡ ನಾಗರಾಜ ಅಷ್ಟೋತ್ತರ ಪಠಣದಿಂದ ನಿವಾರಣೆಯಾಗುತ್ತವೆ. ಯಾರೂ ಸರ್ಪ ಸಂಸ್ಕಾರವನ್ನು ಮಾಡಿ ನಾಗರಪ್ರತಿಷ್ಠೆ ಮಾಡ್ಸುದ್ರು ಕೂಡ ತೊಂದರೆ ಅನುಭವಿಸುತ್ತಿರುವ ಅವರು ನಾಗರಾಜ ದೇವರ ಅಷ್ಟೋತ್ತರವನ್ನು ನಲವತ್ತೆಂಟು ದಿವಸ ಓದಿ ಪೂಜೆ ಮಾಡಿದ್ರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತವೆ .

ಗರ್ಭದೋಶದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರೋರು ನಿಯಮಿತವಾಗಿ ನಾಗರಾಜ ಅಷ್ಟೋತ್ತರವನ್ನು ಪ್ರತಿದಿನ ಓದ್ತಾ ಬಂದ್ರೆ ದೋಷ ನಿವಾರಣೆಯಾಗದೆ ಆರೋಗ್ಯ ಭಾಗವಾಗುತ್ತದೆ .ಅಶ್ವಿನಿ ನಕ್ಷತ್ರ ,ಮಕಾ ನಕ್ಷತ್ರ, ಮೂಲಾ ನಕ್ಷತ್ರ ಉಳ್ಳವರು ಮತ್ತು ಜಾತಕದಲ್ಲಿ ಸರ್ಪ ದೋಷ ಇರೋರಿಗೆ ನಾಗರಾಜ ಅಷ್ಟೋತ್ತರಪಠಣ ಅತ್ಯುತ್ತಮವಾದ ಪರಿಹಾರ .ಸರ್ಪದೋಷದಿಂದ ವಿವಾಹ ಸಮಸ್ಯೆ ಇರೋರು ಪ್ರತಿದಿನ ಸರ್ಪರಾಜ ಅಷ್ಟೋತ್ತರವನ್ನು ಮತ್ತು ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ . ವಿವಾಹಿತರ ಓದಿದರೆ ದಾಂಪತ್ಯ ಚೆನ್ನಾಗಿರುತ್ತೆ. ಇದಿಷ್ಟು ನಾಗರಾಜ ಅಷ್ಟೋತ್ತರದ ಮಾಹಿತಿಯಾಗಿದೆ .

Leave A Reply

Your email address will not be published.