ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಬಗ್ಗೆ ನಿಮಗೆ ತಿಳಿಯದ ವಿಷಯಗಳು!

0 0

ನಮ್ಮ ದೇಶ ದೇವಸ್ಥಾನಗಳಿಗೆ ಪ್ರಸಿದ್ದಿ. ಒಂದೊಂದು ಹೊಣೆಯಲ್ಲಿ ದೇವಾಲಯವನ್ನು ನೋಡಲು ಸಿಗುತ್ತದೆ. ಕೇವಲ ದೇವಾಲಯಕ್ಕೆ ಮಾತ್ರವಲ್ಲ ಪ್ರವಾಸಿ ತಾಣಗಳು ಇವೇ. ಪ್ರತಿ ದೇವಲಯಕ್ಕೂ ಪ್ರತಿ ಪ್ರವಾಸಿ ತಾಣಕ್ಕೂ ತನ್ನದೇ ಅದ ವಿಶೇಷತೆ ಮಹತ್ವ ಇದ್ದೆ ಇರುತ್ತದೆ. ಅದೇ ನಿಟ್ಟಿನಲ್ಲಿ ಇನ್ನು ಕರ್ನಾಟಕ ಈ ಪುಣ್ಯ ಕ್ಷೇತ್ರದ ಹತ್ತರು ವಿಶೇಷತೆಗಳಿಂದ ಕೂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೋಲಾರ ಜಿಲ್ಲೆಗೆ ಬಂಗಾರ ಪೇಟೆಗೆ 12km ದೂರದಲ್ಲಿ ಇರುವ ಕಮ್ಮಸಂದ್ರ. ಇದು ಇಂದಿನ ದಿನಗಳಲ್ಲಿ ಪವಿತ್ರ ಕ್ಷೇತ್ರವಾಗಿ ಕೋಟಿ ಲಿಂಗಗಳ ನಾಡು ಆಗಿದೆ. ಇಲ್ಲಿ 108 ಅಡಿ ಎತ್ತರದ ಬೃಹತ್ ಶಿವಲಿಂಗ ಹಾಗು 32 ಅಡಿ ಎತ್ತರದ ದೊಡ್ಡ ಬಸವಣ್ಣವನ್ನು ಹೊಂದಿದೆ.

ಇಲ್ಲಿ ಭಕ್ತರು ಪ್ರತಿನಿತ್ಯ ಶಿವಲಿಂಗವನ್ನು ಸ್ಥಾಪನೆ ಮಾಡುತ್ತಿದ್ದು ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕೋಟಿ ಲಿಂಗಗಳು ಸ್ಥಾಪನೆ ಆಗುವ ಸಾಧ್ಯತೆ ಇದೆ ಎಂದು ಇದೆ. ಇನ್ನು ಈ ಕ್ಷೇತ್ರ ಕಮ್ಮಸಂದ್ರದಲ್ಲಿ ಇರುವ ಶ್ರೀ ಸಭಾಶಿವ ಮೂರ್ತಿ ಸ್ವಾಮಿಗಳ ಮಾರ್ಗ ದರ್ಶನದಲ್ಲಿ ಇರುವಂತಹ ಈ ಕ್ಷೇತ್ರದಲ್ಲಿ ಮುಖ್ಯದ್ವಾರದಲ್ಲಿ ಮೊದಲು ಶಿವಲಿಂಗ ಮತ್ತು ಬಸವೇಶ್ವರ ದರ್ಶನ ಪಡೆದು. ಎರಡನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳ ದರ್ಶನ ಸಿಗುತ್ತದೆ.

ಅಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಒಂದೇ ಅಂಗಳದಲ್ಲಿ ಪ್ರಧಾನ ಶಿವನ ದೇವಾಲಯವು ಹಾಗು ಬ್ರಹ್ಮ ವಿಷ್ಣು ಮಹೇಶ್ವರ ಅದಿನಾಯಕ ಅಯ್ಯಪ್ಪ ಆಂಜನೇಯ ಪಾರ್ವತಿ ಲಕ್ಷ್ಮಿ ನವಗ್ರಹ ಸತ್ಯ ನಾರಾಯಣ ಸುಬ್ರಹ್ಮಣ್ಯ ಬನಶಂಕರಿ ಮಂಜುನಾಥ ಸ್ವಾಮಿಯ ದರ್ಶನ ಸಿಗುತ್ತದೆ.ಪಕ್ಕದಲ್ಲಿ ಸುಂದವಾದ ಬೃಂದಾವನ ಕೂಡ ಇದೆ. ಇಲ್ಲಿ ಬಿಲ್ವ ಪತ್ರೆ ಮರಕ್ಕೆ ಮತ್ತು ನಾಗಲಿಂಗಕ್ಕೆ ದೇವಾಲಯದಲ್ಲಿ ಪೂಜಿಸಿದ ಪವಿತ್ರವಾದ ದಾರವನ್ನು ಆ ಮರಕ್ಕೆ ಕಟ್ಟಿದರೆ ಇಷ್ಟರ್ಥ ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಇಲ್ಲಿ ಸಾಮೂಹಿಕ ಮದುವೇ ಕೂಡ ಆಗುತ್ತದೆ.

Leave A Reply

Your email address will not be published.